Change language
14 Apr 2025
ಎಸ್. ದಿವಾಕರ್ ಅವರ ಕವನಗಳ ಕುರಿತು ಸಂವಾದ
ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಸಾಹಿತ್ಯ ಸಂಜೆ ಕಾರ್ಯಕ್ರಮ
ಎಸ್. ದಿವಾಕರ್ ಅವರ ಕವನಗಳ ವಾಚನ
ಆಶ್ರಯ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ
ಸಂವಾದ: ಎಸ್. ದಿವಾಕರ್ ಮತ್ತು ಚ.ಹ. ರಘುನಾಥ್
ಬುಧವಾರದ (25-09-2024) ಈ ಕಾರ್ಯಕ್ರಮ, ಒಂದು ಚೇತೋಹಾರಿ ಮತ್ತು ಸ್ವಾಗತಾರ್ಹ ಬೆಳವಣಿಗೆ. ಶ್ರೀಯುತ ದಿವಾಕರ್ ಮತ್ತು ಶ್ರೀಮತಿ ಜಯಶ್ರೀ ಕಾಸರವಳ್ಳಿಯವರ ಮಾತು, ಅವರೊಂದಿನ ಸಂಭಾಷಣೆ, ಮಾಹಿತಿ ಪೂರ್ಣವಾಗಿಯೂ, ವಿಚಾರ ಪ್ರಚೋದಕವಾಗಿಯೂ ಇತ್ತು.
ಪುಸ್ತಕ ಓದುವಿಕೆಯ ಪ್ರಾಮುಖ್ಯತೆ, ಉಪಯೋಗ, ಕನ್ನಡ ಸಾಹಿತಿಗಳಿಗೆ, ಪಾಶ್ಚಾತ್ಯ ಸಾಹಿತ್ಯದ ಪ್ರಭಾವ, ಅದರ ಪರಿಣಾಮ, ಕಾದಂಬರಿ ಪ್ರಕಾರದ ಬರವಣಿಗೆ, ಇವುಗಳ ಬಗ್ಗೆ ಹಲವಾರು ನಿದರ್ಶನಗಳೊಂದಿಗೆ ದಿವಾಕರ್ ಅವರ ಮಾತುಗಾರಿಕೆ ಸೊಗಸಾಗಿತ್ತು.
ಅವರ ಕೆಲವು ವಿಚಾರಗಳು, ಒಂದು, ಆಂಗ್ಲ ಭಾಷೆಯಯಲ್ಲಿನ, ವಿದ್ಯಾಭ್ಯಾಸ, ಆಂಗ್ಲ ಸಾಹಿತ್ಯದ ಪರಿವೆಯಿಂದ ಕನ್ನಡ ಸಾಹಿತ್ಯಕ್ಕೆ ಉಂಟಾದ ನಿರ್ದಿಷ್ಟ ದೆಶೆ, ಇನ್ನೊಂದು, ನಮ್ಮ ಪರಂಪರಾಗತ ಸಾಹಿತ್ಯಕ್ಕೆ ಇದು ಭಿನ್ನವಾಗಿದ್ದರೂ ಅದನ್ನು ಅಳಡಿಸಿಕೊಂಡು, ತಮ್ಮದಾಗಿಸಿಕೊಂಡದ್ದು. ಆದೇ ರೀತಿಯಾಗಿ ಅವರ ನಾಸ್ತಿಕತೆ ಮತ್ತು ಅದಕ್ಕೆ ಕಾರಣ ಸೂಚಕ, ಸಾಮಾನ್ಯವಾಗಿ ಕಾಣುವ ಬರಹಗಾರರ ಉಪದೇಶಕರ ಪ್ರವೃತ್ತಿಗೆ ತಮ್ಮ ಸೌಹಾರ್ದಯುಕ್ತ, ಆರೋಗ್ಯಕರ ಭಿನ್ನಾಭಿಪ್ರಾಯ, ಎರಡೂ ಅವರ ಸ್ವತಂತ್ರ ಚಿಂತನೆ, ವೈಚಾರಿಕ ಆಳಕ್ಕೆ ಸಾಕ್ಷಿ.
Kannada’s eminent writer couple Mr S Diwakar and Mrs Jayashree Kasaravalli visited London in the 3rd week of September .
On the 22nd of September Sunday afternoon, a talk and interaction was organised at Dr Gopalakrishna Hegde’s residence in Watford , North London.
ಎಸ್ದಿವಾಕರ್ ಕನ್ನಡದ ಹಿರಿಯ ಸಾಹಿತಿ. ಕಥೆ, ಕಾವ್ಯ, ಅನುವಾದ, ಸಂಗೀತ, ಚಿತ್ರಕಲೆ, ಫೋಟೊಗ್ರಫಿ, ಸಿನಿಮಾ ಹೀಗೆ ಹಲವು ಸೃಜನಶೀಲ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ 'ನಮ್ಮ ದಿವಾಕರ್' 28.11.2023ರಂದು 80ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಈ ಸಂಭ್ರಮದ ಸಂದರ್ಭದಲ್ಲಿ ಪ್ರಕಟಿಸಲಾದ 'ಪರಿಮಳದ ಪಡಸಾಲೆ' ಎಂಬ ಕೃತಿಗಾಗಿ, ಎಸ್ ದಿವಾಕರ್ ವಾಚಿಸಿದ, ಗೋಪಾಲಕೃಷ್ಣ ಅಡಿಗರ ಕವನ ‘ನೆಲ ಸಪಾಟಿಲ್ಲ’ ಇಲ್ಲಿದೆ.
ಎಸ್ ದಿವಾಕರ್ ಕನ್ನಡದ ಹಿರಿಯ ಸಾಹಿತಿ. ಕಥೆ, ಕಾವ್ಯ, ಅನುವಾದ, ಸಂಗೀತ, ಚಿತ್ರಕಲೆ, ಫೋಟೊಗ್ರಫಿ, ಸಿನಿಮಾ ಹೀಗೆ ಹಲವು ಸೃಜನಶೀಲ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ 'ನಮ್ಮ ದಿವಾಕರ್' 28.11.2023ರಂದು 80ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಈ ಸಂಭ್ರಮದ ಸಂದರ್ಭದಲ್ಲಿ ಪ್ರಕಟಿಸಲಾದ 'ಪರಿಮಳದ ಪಡಸಾಲೆ' ಎಂಬ ಕೃತಿಗಾಗಿ ನಡೆಸಿದ ಅವರ ಸುದೀರ್ಘ ಸಂದರ್ಶನ ಇಲ್ಲಿದೆ.
27 Nov 2023
ಸಂಗೀತ ಸಂಭ್ರಮ (ದಿವಾಕರ್ ವಿರಚಿತ ಭಾವಗೀತೆಗಳ ಗಾಯನ)
ಆಶ್ರಯ : Paramesgwar Edge Sangeet Academy, ಎಸ್. ದಿವಾಕರ್ ಗೆಳೆಯರ ಬಳಗ, ವೀರಲೋಕ
ದಿವಾಕರ್ ವಿರಚಿತ ಭಾವಗೀತೆಗಳ ಗಾಯನ
ಪರಿಕಲ್ಪನೆ ಮತ್ತು ಸಂಯೋಜನೆ : ಪಂ. ಪರಮೇಶ್ವರ ಹೆಗಡೆ
14 Jul 2022
ಬುಕ್ ಬ್ರಹ್ಮದ ಮುಖಾ-ಮುಖಿ ಕಾರ್ಯಕ್ರಮದಲ್ಲಿ ಕತೆಗಾರ, ಲೇಖಕ ಎಸ್. ದಿವಾಕರ್ ಅವರು ಕಥೆ ಮತ್ತು ಕಾವ್ಯಗಳಲ್ಲಿನ ವೈಶಿಷ್ಟ್ಯತೆಗಳ ಬಗೆಗೆ ಮಾತನಾಡಿದ್ದಾರೆ.
ಬುಕ್ ಬ್ರಹ್ಮದ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ ನಿಮಗಾಗಿ..
15 May 2022
S DIWAKAR - Editor , Journalist , Translator , Short Story Writer , Kannada Writer , Music Critic - Reply to Ananthapura Ishvarayya Memorial " KALAPRAVEENA AWARD 2022 by RAGA DHANA udupi at SARIGAMa BHARATHI Parkala on 15--5-2022
Sahitya Akademi presents Webline Literature Series - Kavisandhi programme with S. Diwakar, Well-known Kannada Poet at 5.00 pm on Monday, 22 February, 2021
22 Feb 2020
ಮಾಧ್ಯಮ ಅನೇಕ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ (ಸೀಸನ್ 2) - ಬುತ್ತಿ ಗಂಟು 4ರ ಅತಿಥಿ ಸಣ್ಣ ಕತೆ, ಕವಿತೆ, ಪ್ರಬಂಧ, ಸಮೀಕ್ಷೆ , ಅನುವಾದ, ವಿಮರ್ಶೆ, ಜೀವನಚಿತ್ರ , ಅಂಕಣ ಬರಹ - ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತ ಕನ್ನಡಿಗರಿಗೆ ಸುಪರಿಚಿತರಾಗಿರುವ ಎಸ್ ದಿವಾಕರ್ ಅವರು. ಶ್ರೀ ಸೋಮತನಹಳ್ಳಿ ದಿವಾಕರ ಅವರದು ಪತ್ರಿಕೋದ್ಯಮ ವೃತ್ತಿಯಾದರೆ, ಸಾಹಿತ್ಯ ಹಾಗೂ ಸಂಗೀತ ಇವರ ಪ್ರವೃತ್ತಿ. ಕನ್ನಡದಲ್ಲಿ 30ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುವ ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕುವೆಂಪು ಭಾಷಾ ಭಾರತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ತಾವು ನಡೆದು ಬಂದ ಬರವಣಿಗೆಯ ದಾರಿಯನ್ನು ಬಿಚ್ಚಿಟ್ಟ ಬುತ್ತಿಯ ಈ ಸಂಚಿಕೆಯಲ್ಲಿ ಮೆಲುಕುಹಾಕುತ್ತಾ ಭಾಷೆ, ಅನುವಾದ, ಪದಭಾವ, ಹೀಗೆ ಸಾಹಿತ್ಯದ ಹಲವು ರೂಪುರೇಷೆಗಳನ್ನು ಹೇಗೆ ನೋಡಬೇಕು, ಅನುಭವಿಸಬೇಕು ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಾಧ್ಯಮ ಅನೇಕದೊಂದಿಗಿನ ಈ ಸಂವಾದ ಸಾಹಿತ್ಯಾಸಕ್ತರಿಗೆ ಖುಷಿಕೊಡುವುದೆಂದು ಭಾವಿಸುತ್ತಾ...
2012
3 Sep 2019
ಈ ಭಾಗದಲ್ಲಿ ಎಸ್. ದಿವಾಕರ್ ಅವರು ಕಾವ್ಯದ ಬಗ್ಗೆ ಒಂದೆರಡು ಮಾತುಗಳನ್ನಾಡಿದ್ದಾರೆ
21 Nov 2017
ಮೈಸೂರಿನಲ್ಲಿ ನಡೆವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ಚಂದ್ರಶೇಖರ ಪಾಟೀಲರು (ಚಂಪಾ) ಕವಿಯಾಗಿ , ನಾಟಕಕಾರರಾಗಿ, ಕನ್ನಡ ಪರ ಚಳುವಳಿಗಳಲ್ಲಿ ಸಕ್ರಿಯರಾಗಿ, ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಅವರ ವಿಡಂಬನಾತ್ಮಕ ಕಾವ್ಯಗಳಿಗೆ ಮನಸೋಲದವರು ಕಡಿಮೆ . ‘ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡುವುದಿಲ್ಲ. ದ್ವೇಷವನ್ನು ಕೂಡ’ ಎಂದು ಚಂಪಾ ಹೇಳಿರುವುದನ್ನು ನಾವು ಅವರು ತಮ್ಮ ಕವಿತೆಗಳಲ್ಲಿ ಸೃಷ್ಟಿಸಿದ ವ್ಯಂಗ್ಯದಲ್ಲೂ ಕಾಣಬಹುದು . ಇತಿಹಾಸ ಮತ್ತು ವರ್ತಮಾನದ ರಾಜಕೀಯ , ಸಾಂಸ್ಕೃತಿಕ ಸಂಗತಿಗಳನ್ನು ಪನ್ ಮುಖೇನ ಹಿಡಿದಿಡುವ ಕೆಲವು ಚಂಪಾ ಕವಿತೆಗಳನ್ನು ಎಸ್. ದಿವಾಕರ್ ಇಲ್ಲಿ ಓದಿದ್ದಾರೆ
In the Covid -19 Lock-down period Online Program Organised by SUCHITRA Film Society
26 April 2018
Hottu - Hottige with S. Diwakar | Web Series about Favorite Books
Sotha Kannugalannu Mitukisuva Madhyahna' Book Release | Author - S Diwakar | Bahuroopi | Avadhi
‘ಬಹುರೂಪಿ’ಯ ಪ್ರಕಟಣೆ
ಎಸ್ ದಿವಾಕರ್ ಅವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’
ಕೃತಿ ಬಿಡುಗಡೆ ಸಮಾರಂಭ
These Interviews are made for the Documentary Film about DR. BGL Swamy. Swamiyaana - it’s a Life documentary film about internationally acclaimed Botanist & Writer DR. B.G.L Swamy. He was the only son of DV Gundappa (DVG) who is known for his Contribution to Kannada literature through his "Mankutimmana Kagga".
ಸ್ವಾಮಿಯಾನ-ಇದು ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರಜ್ಞ, ಲೇಖಕ ಬಿಜಿಎಲ್ ಸ್ವಾಮಿಯವರ ಬದುಕಿನ ಕುರಿತ ಸಾಕ್ಷ್ಯಚಿತ್ರ. ಸ್ವಾಮಿಯವರು ತೀರಿಕೊಂಡೇ 40 ವರ್ಷಗಳಾಗಿರುವ ಸಂದರ್ಭದಲ್ಲಿ ಅವರನ್ನು ಅಮರವಾಗಿಸುವ ಪ್ರಯತ್ನ ಈ ಸಾಕ್ಷ್ಯಚಿತ್ರ.